Hrudayake Hedarike Lyrics | Thayige Thakka Maga

Hrudayake Hedarike Song Lyrics in Kannada

About the Song:

Hrudayake Hedarike Kannada Song Lyrics Begining:

ಹೃದಯಕೆ ಹೆದರಿಕೆ ಹೀಗೆ ನೋಡಿದರೆ..
ಹುಡುಕುತ ಬರುವೆಯ ಹೇಳದೆ, ಹೋದರೆ
ಎದೆಯಲ್ಲಿ ಬಿರುಗಾಳಿ.. ಮೊದಲೇನೆ ಇತ್ತು
ನೀ ನನಗೆ.. ಏನೆಂದು ನನಗಷ್ಟೇ ಗೊತ್ತು!

ಹೃದಯಕೆ ಹೆದರಿಕೆ ಹೀಗೆ ನೋಡಿದರೆ..
ಹುಡುಕುತ ಬರುವೆಯ ಹೇಳದೆ ಹೋದರೆ!

ಓ ಮರವೆ, ನಿನ್ನ ತಬ್ಬಿ ಹಬ್ಬುತಿರೋ
ಬಳ್ಳಿ ನಾನು, ಮೆಲ್ಲಗೆ ವಿಚಾರಿಸು ನನ್ನ..
ಮೈ ಮರೆತು, ನಿನ್ನ ಮುಂದೆ ವರ್ತಿಸುವ
ಮಳ್ಳಿ ನಾನು, ಕೋಪವು ನಿವಾರಿಸು ಚಿನ್ನ..
ನೀ ನನಗೆ, ದೊರೆತಂತ ಸಿಹಿಯಾದ ಮತ್ತು..
ನಿನಗಾಗೋ ಕನಸೆಲ್ಲಾ ನನಗಷ್ಟೇ ಗೊತ್ತು!

ಮುಚ್ಚಿರುವ ಕಣ್ಣಿನಲ್ಲೂ ಮೂಡಿರುವ ಬಣ್ಣ ನೀನು..
ಮುತ್ತಿಡು ಮಾತಾಡುವ ಮುನ್ನ..
ನೆನೆ ನೆನೆದು ತುಂಬಾ ಸೊರಗಿ ಆಗಿರುವೆ ಸಣ್ಣ ನಾನು
ಹಿಡಿಸುವೆನು ಹೃದಯದಲ್ಲಿ ನಿನ್ನ..
ನಾ ನಿನ್ನ ಬಿಗಿದಪ್ಪಿ ಇರುವಂತ ಹೊತ್ತು
ಜಗವೆಲ್ಲಾ ಮರೆಯಾಯ್ತು ನನಗಷ್ಟೇ ಗೊತ್ತು!

ಹೃದಯಕೆ ಹೆದರಿಕೆ ಹೀಗೆ ನೋಡಿದರೆ..
ಹುಡುಕುತ ಬರುವೆಯ ಹೇಳದೆ ಹೋದರೆ!

For all Latest Lyrics of Sandalwood, Do Visit LatestKannadaLyrics!

Comments

Comments

Leave a Comment