Maathado Taareya Song Lyrics | Ambi NingVayassaytho

Maathado Taareya Kannada Song Lyrics

About the Song:

  • Film: AMBI NINGVAYASSAYTHO
  • Music: ARJUN JANYA
  • Lyricist: Dr.V.NAGENDRA PRASAD
  • Banner: A KSK SHOWREEL / KICHCHA CREATIONS
  • Record Label: AANANDA AUDIO VIDEO

Maathado Taareya Song Lyrics Begining:

ಮಾತಾಡೂ ತಾರೆಯ ಕಂಡ ಹಾಗೆ
ಬೆಳದಿಂಗಳು ಕೈಯಲ್ಲಿ ಸಿಕ್ಕ ಹಾಗೆ
ನಾನ್ಯಾರೊ ಎಂಬುದೆ ಮರೆತ ಹಾಗೆ
ಮಿಂಚೊಂದು ಮೆಲ್ಲಗೆ ಮುಟ್ಟಿದ ಹಾಗೆ!

ನಿನ್ನ ಕಣ್ಣ ಬಣ್ಣ ರಾತ್ರಿ ಹಾಗೆ
ಅಲ್ಲೆ ನನ್ನ ಬಿಂಬ ಚಂದಿರ
ನಿನ್ನ ಮುದ್ದು ಮುದ್ದು ಮುದ್ದು
ಹಾಲು ಗಲ್ಲ ನಾಜೂಕಾದ ನೇಸರ
ಪಿಸು ಪಿಸು ಪಿಸು ಮಾತಿನಲ್ಲಿ
ಕಣ್ಣ ರೆಪ್ಪೆ ಏನೋ ಹೇಳಿದೆ
ಗುಸು ಗುಸು ಗುಸು ಪ್ರೇಮದಲ್ಲಿ
ಜಾರಿದಂತೆ ಜೀವವೆ…

ಮಾತಾಡೊ ತಾರೆಯ ಕಂಡ ಹಾಗೆ
ಬೆಳದಿಂಗಳು ಕೈಯಲ್ಲಿ ಸಿಕ್ಕ ಹಾಗೆ

ಹಗುರಾದ ಗಾಳಿಗೆ ಇಂದು
ಅಲುಗೋದ ಗೋಪುರದಂತೆ
ಈ ನನ್ನ ಹರೆಯ ಆಗಿದೆ

ಸಿರಿ ಗೌರಿ ಜೀವ ತಳೆದು
ನನಗಾಗೆ ಥೇರಿಂದಿಳಿದು
ಬಂದಂತೆ ಭಾಸ ಆಗಿದೆ

ಮಾತೇಕೊ ಮೌನವನ್ನು
ಹೊತ್ತುಕೊಂಡಿದೆ
ಮೊಟ್ಟ ಮೊದಲು ಹೀಗೆ ನಾನು ಆದೆ ಅದೆ
ಪಿಸು ಪಿಸು ಪಿಸು ಮಾತಿನಲ್ಲಿ
ಕಣ್ಣ ರೆಪ್ಪೆ ಏನೋ ಹೇಳಿದೆ
ಗುಸು ಗುಸು ಗುಸು ಪ್ರೇಮದಲ್ಲಿ
ಜಾರಿದಂತೆ ಜೀವವೆ…

ನದಿ ಹಾಗೆ ನನ್ನ ಹೆಜ್ಜೆ
ಲಯ ಮೀರಿ ಹೋಗುವಾಗ
ನಾ ಹೋಗೊ ದಾರಿ ಮರೆತೆನು …
ಬಾನಾಡಿ ರೆಕ್ಕೆ ಸದ್ದು
ನುಡಿದಂತೆ ನಿನ್ನ ಹೆಸರು
ಅನುರಾಗಿ ನಾನು ಆದೆನು
ಕಾಲವೆಲ್ಲ ಖಾಲಿಯಾದ ಹಾಗೆ ಆಗಿದೆ
ನೀನು ನನ್ನ ತುಂಬಿ ಹೋದೆ ಹೋದೆ

ಪಿಸು ಪಿಸು ಪಿಸು ಮಾತಿನಲ್ಲಿ
ಕಣ್ಣ ರೆಪ್ಪೆ ಏನೋ ಹೇಳಿದೆ
ಗುಸು ಗುಸು ಗುಸು ಪ್ರೇಮದಲ್ಲಿ
ಜಾರಿದಂತೆ ಜೀವವೆ…

ಮಾತಾಡೊ ತಾರೆಯ ಕಂಡ ಹಾಗೆ
ಬೆಳದಿಂಗಳು ಕೈಯಲ್ಲಿ ಸಿಕ್ಕ ಹಾಗೆ!

For all Latest Lyrics of Sandalwood, Do Visit LatestKannadaLyrics!

Comments

Comments

Leave a Comment